Skip to main content

 

Science 37 ನ ವೆಬ್-ಆಧಾರಿತ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನ ನಿಯಮ ಮತ್ತು ಷರತ್ತುಗಳು

Science 37 ನ ವೆಬ್-ಆಧಾರಿತ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮ್‌ನ ನಿಮ್ಮ ಬಳಕೆಯು ಈ ನಿಯಮ ಮತ್ತು ಷರತ್ತುಗಳಿಗೆ ನಿಮ್ಮ ಸಮ್ಮತಿಯನ್ನು ಸೂಚಿಸುತ್ತದೆ. Science 37 ವೆಬ್-ಆಧಾರಿತ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ಲಾಟಫಾರ್ಮನ್ನು ನಿಮ್ಮ ವೈದ್ಯಕೀಯ ಪ್ರಯೋಗದ ಸೌಲಭ್ಯಕ್ಕಾಗಿ ಅನುಮತಿ ನೀಡಿರುತ್ತಿರಿ.  ದಯವಿಟ್ಟು ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಓದಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ, ಅದರಲ್ಲೂ ಪ್ರಮುಖವಾಗಿ, ವಾರಂಟಿಯ ನಿಬಂಧನೆಗಳು, ಪರವಾನಗಿಯ ಮಿತಿಗಳು, ನಿಮ್ಮ ಪ್ರಾತಿನಿಧ್ಯ ಮತ್ತು ವಾರಂಟಿಗಳು, ಹೊಣೆಗಾರಿಕೆಯ ಮಿತಿ, ನಷ್ಟ ಪರಿಹಾರ ಮತ್ತು ಆಡಳಿತ ಕಾನೂನುಗಳನ್ನು ನಾವು ನಿಮ್ಮ ಗಮನಕ್ಕೆ ತರಲೆಂದು ದೊಡ್ಡ ಅಕ್ಷರದಲ್ಲಿ ಬರೆದಿದ್ದೇವೆ ಮತ್ತು ಆಡ್ಡಗೆರೆ ಎಳೆದಿದ್ದೇವೆ.  ಈ ನಿಯಮಗಳು ಮತ್ತು ಷರತ್ತುಗಳನ್ನು ತಿರಸ್ಕರಿಸಿದರೆ ಪ್ರಯೋಗದಲ್ಲಿ ಭಾಗವಹಿಸುವ ನಿಮ್ಮ ಅರ್ಹತೆಯ ಮೇಲೆ ಪರಿಣಾಮ ಬೀರಬಹುದು.

ನಾವು ಯಾರು ಮತ್ತು ಈ ಒಪ್ಪಂದದ ಕುರಿತು

Science 37, Inc. (ಒಟ್ಟಾರೆಯಾಗಿ “Science 37”, “ನಾನು” ಅಥವಾ “ನಾವು”ಎಂದು ಉಲ್ಲೇಖಿಸಲಾಗಿದೆ) ನಿಮಗಾಗಿ ವೈದ್ಯಕೀಯ ಪ್ರಯೋಗಗಳಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ತನ್ನ Science 37 ವೆಬ್-ಆಧಾರಿತ ಮತ್ತು ಮೊಬೈಲ್ ಅಪ್ಲಿಕೇಶನ್ ಪ್ಲಾಟ್‌ಫಾರ್ಮನ್ನು ನಿಮಗೆ ಲೈಸೆನ್ಸ್‌ ("ಫ್ಲಾಟ್‌ಫಾರ್ಮ್") ಮಾಡಿಕೊಡುತ್ತದೆ. ನೀವು ಆಸಕ್ತಿ ವ್ಯಕ್ತಪಡಿಸಿದ ವೈದ್ಯಕೀಯ ಪ್ರಯೋಗಗಳ ("ಪ್ರಯೋಗ") ಒಂದು ಭಾಗವಾಗಿ ಪ್ಲಾಟ್‌ಫಾರ್ಮನ್ನು ಬಳಸಿಕೊಳ್ಳಲು Science 37 ಅನುವು ಮಾಡಿಕೊಡುತ್ತದೆ. ಈ ನಿಯಮ ಮತ್ತು ಷರತ್ತುಗಳು ("ನಿಯಮ ಮತ್ತು ಷರತ್ತುಗಳು")  ಪ್ಲಾಟಫಾರ್ಮ್‌ ಮತ್ತು ಸೇವೆಯ ನಿಮ್ಮ ಬಳಕೆ ಮತ್ತು ಪ್ರವೇಶಕ್ಕೆ ಸಂಬಂಧಿಸಿದಂತೆ Science 37 ಮತ್ತು ನಿಮ್ಮ, ವೈಯುಕ್ತಿಕವಾಗಿ ("ನೀವು ಮತ್ತು ನಿಮ್ಮ") ನಡುವಿನ ಕಾನೂನು ಒಪ್ಪಂದವಾಗಿದೆ. ಈ ಪ್ಲಾಟಫಾರ್ಮನ ನಿಬಂಧನೆಯನ್ನು ನಿಯಮ ಮತ್ತು ಷರತ್ತುಗಳಲ್ಲಿ "ಸೇವೆ" ಎಂದು ಉಲ್ಲೇಖಿಸಲಾಗಿದೆ.  

 

ಈ ಪ್ಲಾಟ್‌ಫಾರ್ಮ್ ಮತ್ತು ಸೇವೆಯನ್ನು ನಿಮಗೆ ಒದಗಿಸುವಲ್ಲಿ Science 37 ರ ಪಾತ್ರ ಸೀಮಿತವಾಗಿದೆ. ವೈದ್ಯಕೀಯ ಪ್ರಯೋಗದ ಪ್ರಾಯೋಜಕರು ಮತ್ತು ಆರೋಗ್ಯಕಾಳಜಿ ಒದಗಿಸುವವರು ಮತ್ತು ಸೇವೆಯ ಮೂಲಕ ನಿಮಗೆ ಪ್ರಯೋಗ-ಸಂಬಂಧಿ ಸೇವೆಗಳನ್ನು ಒದಗಿಸುವ ಇತರೆ ಸಿಬ್ಬಂದಿಗಳಿಂದ Science 37 ಪ್ರತ್ಯೇಕವಾಗಿರುತ್ತದೆ. Science 37 ಅಂತಹ ಆರೋಗ್ಯಕಾಳಜಿ ಒದಗಿಸುವ ಸಿಬ್ಬಂದಿಗಳ ಕಾರ್ಯಗಳು, ಲೋಪಗಳು ಅಥವಾ ಅವರ ನಡೆಸುವ ಯಾವುದೇ ಸಂವಹನದಲ್ಲಿನ ವಿಷಯಕ್ಕೆ ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ ಮತ್ತು ಹೊಣೆಗಾರನಾಗಿರುವುದಿಲ್ಲ. ಈ ಪ್ಲಾಟ್‌ಫಾರ್ಮ್ ಮತ್ತು ಸೇವೆಯನ್ನು ಒದಗಿಸುವ ಮೂಲಕ Science 37 ಯಾವುದೇ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವುದಿಲ್ಲ.

ನಿಮ್ಮ ಗೌಪ್ಯತೆ

ನೀವು ನಮ್ಮ ಪ್ಲಾಟ್‌ಫಾರ್ಮ ಮತ್ತು ಸೇವೆಯನ್ನು ಬಳಸುವಾಗ ಒದಗಿಸುವ ಯಾವುದೇ ವೈಯುಕ್ತಿಕ ಮಾಹಿತಿಯನ್ನು ನಾವು ಗೌಪ್ಯತಾ ನಿಯಮದಲ್ಲಿ ನಿಗದಿಪಡಿಸಿದ ರೀತಿಯಲ್ಲಿ ಮಾತ್ರವೇ ಬಳಸಿಕೊಳ್ಳುತ್ತೇವೆ. ನಾವು ಈ ದತ್ತಾಂಶವನ್ನು ಇತರೆ ಯಾವುದೇ ಸೇವೆಗಳಿಗೆ ಬಳಸುವುದಿಲ್ಲ.

ಒಂದು ವೇಳೆ ನೀವು ಆ್ಯಪ್‌ಸ್ಟೋರ್‌ನಿಂದ ಪ್ಲಾಟ್‌ಫಾರ್ಮನ್ನು ಡೌನಲೋಡ್ ಮಾಡಿಕೊಂಡರೆ, ಆ ಆ್ಯಪ್ ಸ್ಟೋರ್‌ನ ನಿಯಮ ಮತ್ತು ಷರತ್ತುಗಳು ಮತ್ತು ಗೌಪ್ಯತಾ ನಿಯಮಗಳು ನಿಮಗೆ ಅನ್ವಯಿಸುತ್ತವೆ. ನೀವು ಪ್ಲಾಟ್‌ಫಾರ್ಮ್‌ ಅನ್ನು ಡೌನಲೋಡ್ ಮಾಡಲು ಬಳಸಿದ ಆ್ಯಪ್‌ಸ್ಟೋರ್‌ನ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಹಾಗೂ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಅವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯಲು ಅವರ ನಿಯಮಗಳು ಮತ್ತು ಷರತ್ತುಗಳು ಹಾಗೂ ಗೌಪ್ಯತಾ ನೀತಿಯನ್ನು ಓದಬೇಕೆಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

 

ಫ್ಲಾಟ್‌ಫಾರ್ಮ್‌ಗಾಗಿನ ಬೆಂಬಲ

ಒಂದು ವೇಳೆ ನೀವು ಫ್ಲಾಟ್‌ಫಾರ್ಮ್‌ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿದಲ್ಲಿ ಅಥವಾ ಪ್ಲಾಟ್‌ಫಾರ್ಮ್‌ ಬಳಸುವಲ್ಲಿ ನಿಮಗೇನಾದರೂ ಸಹಾಯ ಬೇಕಾಗಿದ್ದರೆ, ನೀವು ನಮ್ಮನ್ನು ಇಲ್ಲಿ ಸಂಪರ್ಕಿಸಬಹುದು techsupport@science37.com.

ಈ ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಲು ಮತ್ತು ಫ್ಲಾಟ್‌ಫಾರ್ಮ್‌ ಅನ್ನು ಬಳಸಲು ನಿಮಗೆ 13 ವರ್ಷ (ಅಥವಾ ನೀವು ವಾಸವಿರುವ ದೇಶ ಅಥವಾ ಪ್ರದೇಶಕ್ಕೆ ಅನುಗುಣವಾಗಿ ಇದಕ್ಕೆ ಸಮಾನವಾದ ಕನಿಷ್ಟ ವಯಸ್ಸನ್ನು ತಲುಪಿರಬೇಕು)  ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು.

ಒಂದು ವೇಳೆ ಈ ನಿಯಮ ಮತ್ತು ಷರತ್ತುಗಳಿಗೆ ಒಳಪಡಲು ನೀವು  ಕಾನೂನಾತ್ಮಕ ಸಾಮರ್ಥ್ಯವಿಲ್ಲದಿದ್ದಲ್ಲಿ (ಉದಾಹರಣೆಗೆ ನೀವು ಅಪ್ರಾಪ್ತವಯಸ್ಕರಾಗಿದ್ದರೆ) ನೀವು ಕಾನೂನು ಪಾಲಕರ ಜೊತೆಗೆ ಈ ನಿಯಮ ಮತ್ತು ಷರತ್ತುಗಳನ್ನು  ಓದಿರುವಿರಿ ಎಂದು ಖಚಿತಪಡಿಸಿಕೊಳ್ಳಿರಿ ಮತ್ತು ದಯವಿಟ್ಟು ನಿಮ್ಮ ಕಾನೂನು ಪಾಲಕರೊಂದಿಗೆ ನಿಯಮ ಮತ್ತು ಷರತ್ತುಗಳನ್ನು ಓದಿ ತಿಳಿದುಕೊಂಡು ಅವರ ಅನುಮತಿ ಪಡೆದ ನಂತರವೇ ಪ್ಲಾಟ್‌ಫಾರ್ಮನ್ನು ನೀವು ಬಳಸಬೇಕು.

ಪ್ಲಾಟ್‌ಫಾರ್ಮ್‌ ಅನ್ನು ನೀವು ಹೇಗೆ ಬಳಸಬಹುದು

ಈ ನಿಯಮ ಮತ್ತು ಷರತ್ತುಗಳನ್ನು ಅನುಸರಣೆ ಮಾಡಲು ಒಪ್ಪಿಕೊಂಡಿರುವುದಕ್ಕೆ ಪ್ರತಿಯಾಗಿ, ನೀವು:

(i)        ಫ್ಲಾಟ್‌ಫಾರ್ಮ್‌ನ ಒಂದು ಪ್ರತಿಯನ್ನು ನಿಮ್ಮ ಮೊಬೈಲ್ ಸಾಧನಕ್ಕೆ ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ವೀಕ್ಷಿಸಬಹುದು, ಮತ್ತು ಅಂತಹ ಸಾಧನದಲ್ಲಿ ಪ್ಲಾಟ್‌ಫಾರ್ಮ್‌ ಮತ್ತು ಸೇವೆಯನ್ನು ನಿಮ್ಮ ವೈಯುಕ್ತಿಕ ಉದ್ಧೇಶಗಳಿಗಾಗಿ ಮಾತ್ರ ಬಳಸಬಹುದು; ಮತ್ತು

(ii)        ಯಾವುದೇ ಪೂರಕ ಸಾಫ್ಟವೇರ್ ಕೋಡ್ ಅಥವಾ ನಾವು ಲಭ್ಯವಾಗುವಂತೆ ಮಾಡುವ "ಪ್ಯಾಚ್" ಅನ್ನು ಮತ್ತು ದೋಷಗಳ ತಿದ್ದುಪಡಿಗಳನ್ನು ಅಳವಡಿಸುವ ಪ್ಲಾಟ್‌ಫಾರ್ಮ್ ನವೀಕರಣಗಳನ್ನು ಸ್ವೀಕರಿಸಬಹುದು ಮತ್ತು ಬಳಸಬಹುದು.

ನೀವು ಫ್ಲಾಟ್‌ಫಾರ್ಮನ್ನು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿರದೇ ಇರಬಹುದು.

ಈ ನಿಯಮ ಮತ್ತು ಷರತ್ತುಗಳ ಒಪ್ಪಂದಕ್ಕೆ ಬದಲಾಗಿ. ನಾವು ಮೇಲೆ ತಿಳಿಸಿರುವಂತೆ ಪ್ಲಾಟ್‌ಫಾರ್ಮ್‌ ಮತ್ತು ಸೇವೆಗಳನ್ನು ನಿಮ್ಮ ವೈಯುಕ್ತಿಕ ಬಳಕೆಗಾಗಿ ಮಾತ್ರನೀಡುತ್ತಿದ್ದೇವೆ. ನೀವು ಪ್ಲಾಟ್‌ಫಾರ್ಮ್‌ ಅನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ.

ಪ್ಲಾಟ್‌ಫಾರ್ಮ್‌ನ ನವೀಕರಣಗಳು ಮತ್ತು ಸೇವೆಯಲ್ಲಿನ ಬದಲಾವಣೆಗಳು

ನಾವು ಕಾಲಕಾಲಕ್ಕೆ ಕಾರ್ಯನಿರ್ವಹಣೆ ಸುಧಾರಿಸಲು, ಕಾರ್ಯಶೀಲತೆಯನ್ನು ಹೆಚ್ಚಿಸಲು‌, ಕಾರ್ಯಾಚರಣೆ ವ್ಯವಸ್ಥೆಗೆ ಬದಲಾವಣೆಗಳನ್ನು ತರಲು ಅಥವಾ ಭದ್ರತಾ ಸಮಸ್ಯೆಗಳನ್ನು ನಿರ್ವಹಿಸಲು ಪ್ಲಾಟ್‌ಫಾರ್ಮ್‌ ಅನ್ನು ಮತ್ತು/ಅಥವಾ ಸೇವೆಯನ್ನು ನಾವು ಕಾಲಕಾಲಕ್ಕೆ ಸ್ವಯಂಚಾಲಿತವಾಗಿ ನವೀಕರಿಸಬಹುದು ಅಥವಾ ಬದಲಾಯಿಸಬಹುದು. ಪರ್ಯಾಯವಾಗಿ, ಈ ಕಾರಣಗಳಿಗಾಗಿ ಪ್ಲಾಟ್‌ಫಾರ್ಮ್‌ ಅನ್ನು ನವೀಕರಿಸಲು ನಾವು ನಿಮ್ಮನ್ನು ಕೇಳಬಹುದು.

ಒಂದು ವೇಳೆ ಅಂತಹ ನವೀಕರಣಗಳನ್ನು ಸ್ಥಾಪಿಸದಿರಲು ಅಥವಾ ಸ್ವಯಂಚಾಲಿತ ನವೀಕರಣಗಳಿಂದ ನೀವು ಹೊರಗುಳಿಯಲು ನೀವು ಆರಿಸಿಕೊಂಡರೆ ನೀವು ಪ್ಲಾಟ್‌ಫಾರ್ಮ್ ಮತ್ತು ಸೇವೆಯನ್ನು ಬಳಸುವುದನ್ನು ಮುಂದುವರಿಸಲು ಸಾಧ್ಯವಾಗದೇ ಇರುಬಹುದು.

ಒಂದು ವೇಳೆ ನೀವು ಬಳಸುತ್ತಿರುವ ಪೋನ್‌ ಅಥವಾ ಸಾಧನವು ಬೇರೆಯವರ ಮಾಲೀಕತ್ವದಲ್ಲಿದ್ದರೆ

ನೀವು ಪ್ಲಾಟ್‌ಫಾರ್ಮನ್ನು ನಿಮ್ಮ ಮಾಲಿಕತ್ವದಲ್ಲಿಲ್ಲದ ಯಾವುದೇ ಫೋನ್ ಅಥವಾ ಇತರ ಸಾಧನಕ್ಕೆ ಡೌನ್ಲೋಡ್ ಮಾಡಿದರೆ, ಹಾಗೆ ಮಾಡಲು ನೀವು ಮಾಲೀಕರ ಅನುಮತಿಯನ್ನು ಹೊಂದಿರಬೇಕು. ನೀವು ಪ್ಲಾಟ್‌ಫಾರ್ಮ್ ಅನ್ನು ಡೌನ್ಲೋಡ್ ಮಾಡಿದ ಫೋನ್‌ ಅಥವಾ ಸಾಧನದ ಮಾಲಿಕತ್ವವನ್ನು ನೀವು ಹೊಂದಿಲ್ಲದಿದ್ದರೆ ನಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಅನುಸರಣೆ ಮಾಡುವ ಪೂರ್ಣ ಜವಾಬ್ದಾರಿ ನಿಮ್ಮದೇ ಆಗಿರುತ್ತದೆ.

ಪರವಾನಗಿಯ ನಿರ್ಬಂಧಗಳು

ನೀವು ಈ ರೀತಿ ಮಾಡುವುದಿಲ್ಲವೆಂದು ಒಪ್ಪಿಕೊಳ್ಳುತ್ತೀರಿ:

(i)        ಈ ಪರವಾನಗಿಯಲ್ಲಿ ಸ್ಪಷ್ಟವಾಗಿ ಅನುಮತಿಸದ ಹೊರತು ಪ್ಲಾಟ್‌ಫಾರ್ಮ್‌ ಅನ್ನು ಪ್ರತಿ ಮಾಡುವುದು;

(ii)       ಪೇಟೆಂಟ್‌ ಮಾಡಬಹುದಾದ ಅಥವಾ ಮಾಡದೇ ಇರಬಹುದಾದ ಪ್ಲಾಟ್‌ಫಾರ್ಮ್‌ ಅನ್ನು ಮಾರ್ಪಡಿಸುವ, ಭಾಷಾಂತರಿಸುವ, ಹೊಂದಿಸುವ, ಅಥವಾ ಆದರ ಉತ್ಪನ್ನದ ಕೃತಿಗಳನ್ನು ಅಥವಾ ಸುಧಾರಣೆಗಳನ್ನು ರಚಿಸುವುದು.

(iii)       ಪ್ಲಾಟ್‌ಫಾರ್ಮ್‌‌ ಅನ್ನು ಅಥವಾ ಅದರ ಯಾವುದೇ ಭಾಗಕ್ಕೆ ರಿವರ್ಸ್ ಇಂಜಿನಿಯರ್ ಮಾಡುವ, ಬಿಚ್ಚಿಹಾಕುವ, ಮರುಹೊಂದಿಸುವ, ಡೀಕೋಡ್ ಮಾಡುವ, ಅಥವಾ ಸೋರ್ಸ್‌ ಕೋಡ್‌ಗೆ ಪ್ರವೇಶವನ್ನು ಉತ್ಪಾದಿಸಲು ಅಥವಾ ಗಳಿಸಲು ಪ್ರಯತ್ನವನ್ನು ಮಾಡುವುದು;

(iv)      ಅದರ ಪ್ರತಿಯೂ ಸೇರಿದಂತೆ, ಪ್ಲಾಟ್‌ಫಾರ್ಮ್‌ನ ಯಾವುದೇ ಟ್ರೇಡ್‌ಮಾರ್ಕ್‌ಗಳು ಅಥವಾ ಯಾವುದೇ ಕಾಪಿರೈಟ್‌ ಅನ್ನು, ಟ್ರೇಡ್‌ಮಾರ್ಕ್, ಪೇಟೆಂಟ್ ಅಥವಾ ಇತರ ಬೌದ್ಧಿಕ ಆಸ್ತಿ ಅಥವಾ ಸ್ವಾಮ್ಯದ ಹಕ್ಕುಗಳ ಸೂಚನೆಗಳನ್ನು ತೆಗೆದುಹಾಕುವುದು, ಬದಲಾಯಿಸುವುದು, ಅಥವಾ ಅಸ್ಪಷ್ಟಗೊಳಿಸುವುದು;

(v)       ಪ್ಲಾಟ್‌ಫಾರ್ಮ್‌ ಅನ್ನು ಯಾವುದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚಿನ ಸಾಧನದಿಂದ ಬಳಸುವ ಸಾಧ್ಯತೆ ಇರುವಂತಹ ಒಂದು ನೆಟ್‌ವರ್ಕ್‌ ಮೂಲಕ ಪ್ಲಾಟ್‌ಫಾರ್ಮ್‌ ಅನ್ನು, ಅಥವಾ ಪ್ಲಾಟ್‌ಫಾರ್ಮ್‌ನ ಯಾವುದೇ ವೈಶಿಷ್ಟ್ಯಗಳನ್ನು ಯಾವುದೇ ಕಾರಣಕ್ಕಾಗಿ ಮೂರನೆ ಪಕ್ಷಕ್ಕೆ ಬಾಡಿಗೆ, ಗುತ್ತಿಗೆ, ಎರವಲು, ಮಾರಾಟ, ಉಪಪರವಾನಗಿ ನೀಡುವುದು, ವಿತರಿಸುವುದು, ಪ್ರಕಟಿಸುವುದು, ವರ್ಗಾಯಿಸುವುದು ಅಥವಾ ಲಭ್ಯವಾಗುವಂತೆ ಮಾಡುವುದು; ಅಥವಾ

(vi)      ಪ್ಲಾಟ್‌ಫಾರ್ಮ್‌ನಲ್ಲಿನ ಅಥವಾ ಅದನ್ನು ಸಂರಕ್ಷಿಸುತ್ತಿರುವ ನಕಲುಪ್ರತಿ ರಕ್ಷಣೆ, ಹಕ್ಕುಗಳ ನಿರ್ವಹಣೆ, ಅಥವಾ ಭದ್ರತಾ ವೈಶಿಷ್ಟ್ಯಗಳ ಸಂರಕ್ಷಣೆಯನ್ನು ತೆಗೆದುಹಾಕುವುದು, ನಿಷ್ಕ್ರಿಯಗೊಳಿಸುವುದು, ತಪ್ಪಿಸುವುದು, ಅಥವಾ ಯಾವುದೇ ಪರ್ಯಾಯ ಮಾರ್ಗವನ್ನು ರಚಿಸುವುದು ಅಥವಾ ಅಳವಡಿಸುವುದು.

ನಿಮ್ಮ ಪ್ರಾತಿನಿಧ್ಯತೆಗಳು ಮತ್ತು ವಾರಂಟಿಗಳು

ಪ್ಲಾಟ್‌ಫಾರ್ಮನ್ನು ಬಳಸುವ ಮೂಲಕ ನೀವು ಈ ಕೆಳಗಿನ ನಿಯಮಗಳನ್ನು ಒಪ್ಪಿಕೊಳ್ಳುತ್ತೀರಿ:

(i)        ನೀವು ಪ್ಲಾಟ್‌ಫಾರ್ಮ್‌ ಅನ್ನು ಅಥವಾ ಸೇವೆಯನ್ನು ಯಾವುದೇ ಕಾನೂನುಬಾಹಿರ ರೀತಿಯಲ್ಲಿ, ಯಾವುದೇ ಕಾನೂನುಬಾಹಿರ ಉದ್ದೇಶಕ್ಕಾಗಿ ಅಥವಾ ಯಾವುದೇ ರೀತಿಯಲ್ಲಿ ಈ ನಿಯಮಗಳಿಗೆ ವಿರುದ್ದವಾಗಿ ಅಥವಾ ಮೋಸ ಮಾಡಲು ಅಥವಾ ದುರುದ್ದೇಶಕ್ಕಾಗಿ ಬಳಸುವುದಿಲ್ಲ, ಉದಾಹರಣೆಗೆ, ಪ್ಲಾಟ್‌ಫಾರ್ಮ್‌ ಅಥವಾ ಸೇವೆಯನ್ನು ಹ್ಯಾಕ್‌ ಮಾಡುವುದು ಅಥವಾ ವೈರಸ್‌ಗಳಂತಹ ದುರುದ್ದೇಶಪೂರಿತ ಕೋಡ್ ಸೇರಿದಂತೆ ಹಾನಿಕಾರಕ ಡೇಟಾವನ್ನು ಸೇರಿಸುವುದು;

(ii)       ಪ್ಲಾಟ್‌ಫಾರ್ಮ್‌ ಅಥವಾ ಸೇವೆಯ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ನೀವು ನಮ್ಮ ಬೌದ್ಧಿಕ ಆಸ್ತಿಯ ಹಕ್ಕುಗಳನ್ನು ಅಥವಾ ಯಾವುದೇ ಮೂರನೇ ವ್ಯಕ್ತಿಯ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು;

(iii)      ಪ್ಲಾಟ್‌ಫಾರ್ಮ್‌ ಅಥವಾ ಸೇವೆಯ ನಿಮ್ಮ ಬಳಕೆಗೆ ಸಂಬಂಧಿಸಿದಂತೆ ಮಾನಹಾನಿಕರವಾದ, ಆಕ್ರಮಣಕಾರಿಯಾದ ಅಥವಾ ಆಕ್ಷೇಪಾರ್ಹವಾದ ಯಾವುದೇ ವಿಷಯವನ್ನು ನೀವು ಪ್ರಸಾರ ಮಾಡುವುದಿಲ್ಲ;

(iv)      ನೀವು ಪ್ಲಾಟ್‌ಫಾರ್ಮ್ ಅಥವಾ ಸೇವೆಗೆ ಸಂಬಂಧಿಸಿದಂತೆ, ಅದರ ಸುರಕ್ಷತೆಯನ್ನು ಹಾನಿ ಮಾಡುವ, ನಿಷ್ಕ್ರಿಯಗೊಳಿಸುವ, ಅಧಿಕ ಹೊರೆ ನೀಡುವ, ದುರ್ಬಲಗೊಳಿಸುವ ಅಥವಾ ರಾಜಿ ಮಾಡುವ ರೀತಿಯಲ್ಲಿ ಪ್ಲಾಟ್‍ಫಾರ್ಮ್ ಅಥವಾ ಸೇವೆಯನ್ನು ಬಳಸುವುದಿಲ್ಲ ಅಥವಾ ಇತರ ಬಳಕೆದಾರರೊಂದಿಗೆ ಹಸ್ತಕ್ಷೇಪ ಮಾಡುವುದಿಲ್ಲ; ಮತ್ತು

(v)       ನೀವು ಈ ಸೇವೆಯಿಂದ ಯಾವುದೇ ತರಹದ ಮಾಹಿತಿ ಅಥವಾ ದತ್ತಾಂಶವನ್ನು ಸಂಗ್ರಹಿಸುವುದಿಲ್ಲ ಅಥವಾ ಕಲೆಹಾಕುವುದಿಲ್ಲ.

ಬೌದ್ದಿಕ ಆಸ್ತಿಯ ಹಕ್ಕುಗಳು

ಪ್ರಪಂಚದಾದ್ಯಂತ ಪ್ಲಾಟ್‌ಫಾರ್ಮ್‌ ಮತ್ತು ಸೇವೆಯ ಎಲ್ಲಾ ಬೌದ್ಧಿಕ ಆಸ್ತಿಯ ಹಕ್ಕುಗಳು Science 37ಯ ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ ಮತ್ತು ಅದರ ಹಕ್ಕುಗಳನ್ನು ಪ್ಲಾಟ್‌ಫಾರ್ಮ್ ಮತ್ತು ಸೇವೆಯನ್ನು ಬಳಸುವುದಕ್ಕಾಗಿ ಮಾತ್ರ ನಿಮಗೆ ಪರವಾನಗಿ ಮಾಡಲಾಗಿರುತ್ತದೆ (ಮಾರಾಟ ಮಾಡಿರುವುದಿಲ್ಲ). ಈ ನಿಯಮಗಳು ಮತ್ತು ಷರತ್ತುಗಳಿಗೆ ಅನುಸಾರವಾಗಿ ಪ್ಲಾಟ್‌ಫಾರ್ಮ್‌ ಅಥವಾ ಸೇವೆಯನ್ನು ಬಳಸುವ ಹಕ್ಕನ್ನು ಹೊರತುಪಡಿಸಿ ಅದರಲ್ಲಿ ಅಥವಾ ಅದಕ್ಕೆ ಯಾವುದೇ ಬೌದ್ಧಿಕ ಆಸ್ತಿ ಹಕ್ಕುಗಳನ್ನು ನೀವು ಹೊಂದಿರುವುದಿಲ್ಲ.

ಅಂತ್ಯಗೊಳಿಕೆ

ಒಂದು ವೇಳೆ ನೀವು ಈ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದರೆ, ಫ್ಲಾಟ್‌ಫಾರ್ಮ್ ಮತ್ತು/ಅಥವಾ ಸೇವೆಗಳನ್ನು ಬಳಸುವ ನಿಮ್ಮ ಸಾಮರ್ಥ್ಯವನ್ನು ಅಂತ್ಯಗೊಳಿಸಲಾಗುತ್ತದೆ. ಈ ಕ್ರಮಗಳು Science 37 ಗೆ ಕಾನೂನಿನಲ್ಲಿ ಲಭ್ಯವಿರುವ ಇತರೆ ಹಕ್ಕು ಅಥವಾ ಪರಿಹಾರಕ್ಕೆ ಹೆಚ್ಚುವರಿಯಾಗಿ ಇರುತ್ತವೆ.

ನೀವು ಪ್ಲಾಟ್‌ಫಾರ್ಮ್ ಮತ್ತು ಸೇವೆಯನ್ನು ಪ್ರವೇಶಿಸುವುದು ಮತ್ತು ಬಳಸುವುದನ್ನು ನಿಲ್ಲಿಸುವ ಮೂಲಕ ಈ ನಿಯಮಗಳು ಮತ್ತು ಷರತ್ತುಗಳನ್ನು ಅಂತ್ಯಗೊಳಿಸಬಹುದು.   

ನಾವು ಈ ನಿಯಮಗಳು ಮತ್ತು ಷರತ್ತುಗಳನ್ನು, ಯಾವುದೇ ಸೂಚನೆಯಿಲ್ಲದೆ ಅಥವಾ ಯಾವುದೇ ಕಾರಣವಿಲ್ಲದೆ ಯಾವುದೇ ಸಮಯದಲ್ಲಾದರೂ ಸಹ ಬಿಡುಗಡೆಗೊಳಿಸಬಹುದು. 

ಅಂತ್ಯಗೊಳಿಕೆಯ ನಂತರ:

ಈ ನಿಯಮಗಳು ಮತ್ತು ಷರತ್ತುಗಳಡಿಯಲ್ಲಿ ನಿಮಗೆ ನೀಡಲಾದ ಎಲ್ಲಾ ಹಕ್ಕುಗಳೂ ಸಹ ಕೊನೆಗೊಳ್ಳುತ್ತವೆ; ಮತ್ತು ನೀವು ಪ್ಲಾಟ್‌ಫಾರ್ಮ್‌ನ ಎಲ್ಲಾ ಬಳಕೆಯನ್ನು ನಿಲ್ಲಿಸಬೇಕು ಮತ್ತು ನಿಮ್ಮ ಮೊಬೈಲ್ ಸಾಧನದಿಂದ ಅಪ್ಲಿಕೇಶನ್ ಅನ್ನು ಅಳಿಸಬೇಕು. ಪ್ಲಾಟ್‌ಫಾರ್ಮ್‌ಗೆ ನೀವು ಪ್ರವೇಶಿಸುವ ಮತ್ತು ಬಳಸುವ ನಿಮ್ಮ ಹಕ್ಕುಗಳನ್ನು Science 37 ತೆಗೆದುಹಾಕುತ್ತದೆ.

ಈ ಅಂತ್ಯಗೊಳಿಕೆಯು ಕಾನೂನು ಅಥವಾ ನೀತಿಯಲ್ಲಿ Science 37 ಹೊಂದಿರುವ ಯಾವುದೇ ಹಕ್ಕುಗಳು ಅಥವಾ ಪರಿಹಾರಗಳನ್ನು ಮಿತಿಗೊಳಿಸುವುದಿಲ್ಲ.

ವಾರಂಟಿಗಳ ಹಕ್ಕು ನಿರಾಕರಣೆ .. ನಿಮಗೆ ಪ್ಲಾಟ್‌ಫಾರ್ಮ್‌ ಅನ್ನು "ಹೇಗಿದೆಯೋ ಹಾಗೆ" ಮತ್ತು ಯಾವುದೇ ರೀತಿಯ ವಾರಂಟಿಯಿಲ್ಲದೆ ಎಲ್ಲಾ ದೋಷಗಳು ಮತ್ತು ನ್ಯೂನತೆಗಳೊಂದಿಗೆ ಒದಗಿಸಲಾಗಿದೆ. ಅನ್ವಯವಾಗುವ ಕಾನೂನಿನಿಂದ ಅಡಿಯಲ್ಲಿ ಗರಿಷ್ಠ ಮಟ್ಟದ ವ್ಯಾಪ್ತಿವರೆಗೆ SCIENCE 37 ಅಭಿವ್ಯಕ್ತ, ಸೂಚಿತ, ಶಾಸನಬದ್ಧ ಅಥವಾ ಬೇರೆ ರೀತಿಯಲ್ಲಿ, ವ್ಯಾಪಾರಿತ್ವದ ಎಲ್ಲಾ ಸೂಚಿತ ವಾರಂಟಿಗಳು, ನಿರ್ದಿಷ್ಟ ಉದ್ದೇಶಕ್ಕಾಗಿನ ಸದೃಢತೆ, ಟೈಟಲ್‌ ಮತ್ತು ಉಲ್ಲಂಘನೆಯಾಗದಿರುವುದು ಮತ್ತು ವ್ಯವಹಾರ, ಕಾರ್ಯಕ್ಷಮತೆ, ಬಳಕೆ ಅಥವಾ ವ್ಯಾಪಾರ ಅಭ್ಯಾಸದ ಮೂಲಕ ಉದ್ಭವಿಸಬಹುದಾದ ವಾರಂಟಿಗಳು ಸೇರಿದಂತೆ ಪ್ಲಾಟ್‌ಫಾರ್ಮ್‌ಗೆ ಸಂಬಂಧಿಸಿದಂತೆ ಎಲ್ಲಾ ವಾರಂಟಿಗಳನ್ನು ಸ್ಪಷ್ಟವಾಗಿ ನಿರಾಕರಿಸುತ್ತದೆ. ಮೇಲೆ ತಿಳಿಸಿದ ಯಾವುದೇ ಮಿತಿಯಿಲ್ಲದೆ, SCIENCE 37 ಯಾವುದೇ ವಾರಂಟಿ ಅಥವಾ ಹೊಣೆಗಾರಿಕೆಯನ್ನು ತೆಗೆದುಕೊಳ್ಳುವುದಿಲ್ಲ, ಮತ್ತು ಪ್ಲಾಟ್‌ಫಾರ್ಮ್‌ನ ನಿಮ್ಮ ಅವಶ್ಯಕತೆಗಳನ್ನು ಪೂರೈಸುತ್ತದೆ, ಯಾವುದೇ ಉದ್ದೇಶಿತ ಫಲಿತಾಂಶಗಳನ್ನು ಸಾಧಿಸುತ್ತದೆ, ಹೊಂದಿಕೆಯಾಗುತ್ತದೆ, ಅಥವಾ ಯಾವುದೇ ಇತರ ಸಾಫ್ಟ್‌ವೇರ್, ಅಪ್ಲಿಕೇಶನ್‌ಗಳು, ವ್ಯವಸ್ಥೆಗಳು ಅಥವಾ ಸೇವೆಗಳೊಂದಿಗೆ ಕೆಲಸ ಮಾಡುತ್ತದೆ, ಯಾವುದೇ ಕಾರ್ಯಕ್ಷಮತೆ ಅಥವಾ ವಿಶ್ವಾಸಾರ್ಹತೆ ಮಾನದಂಡಗಳನ್ನು ಪೂರೈಸುತ್ತದೆ, ಅಥವಾ ದೋಷರಹಿತವಾಗಿರುತ್ತದೆ, ಅಥವಾ ಯಾವುದೇ ದೋಷಗಳು ಅಥವಾ ನ್ಯೂನತೆಗಳನ್ನು ಸರಿಪಡಿಸಬಹುದು ಅಥವಾ ಸರಿಪಡಿಸಲಾಗುವುದು ಎಂಬ ಯಾವುದೇ ರೀತಿಯ ಹೇಳಿಕೆಯನ್ನು ನೀಡುವುದಿಲ್ಲ.

ಈ ಮೇಲಿನ ನಿಬಂಧನೆಗಳು ಮತ್ತು ಷರತ್ತುಗಳ ಹೊರತಾಗಿಯೂ, ನಿರ್ಲಕ್ಷ್ಯ, ವಂಚನೆ ಅಥವಾ ಮೋಸದ ತಪ್ಪು ನಿರೂಪಣೆಯಿಂದ ಅಜಾಗರೂಕತೆಯಿಂದ ಉಂಟಾದ ಸಾವು ಅಥವಾ ವೈಯಕ್ತಿಕ ಗಾಯಕ್ಕಾಗಿ ಅಥವಾ ಅನ್ವಯವಾಗುವ ಕಾನೂನುಗಳಿಂದ ಸೀಮಿತವಾಗಿರದೇ ಇರುವ ಅಥವಾ ಹೊರಗಿಡಲಾಗದ ಇತರ ಹೊಣೆಗಾರಿಕೆಗಾಗಿ ಯಾವುದೇ ಪಕ್ಷದ ಹೊಣೆಗಾರಿಕೆಯನ್ನು ಇನ್ನೊಬ್ಬರಿಗೆ ಹೊರತುಪಡಿಸಲು ಅಥವಾ ಸೀಮಿತಗೊಳಿಸಲು ಈ ನಿಯಮಗಳು ಮತ್ತು ಷರತ್ತುಗಳಲ್ಲಿ ಯಾವುದೂ ಬಯಸುವುದಿಲ್ಲ.

ಕೆಲವು ನ್ಯಾಯವ್ಯಾಪ್ತಿಗಳು ವಾರಂಟಿಗಳ ಕೆಲವು ಹಕ್ಕು ನಿರಾಕರಣೆಗಳನ್ನು ಅನುಮತಿಸುವುದಿಲ್ಲ ಆದ್ದರಿಂದ ಮೇಲಿನ ಕೆಲವು ಅಥವಾ ಎಲ್ಲವೂ ನಿಮಗೆ ಅನ್ವಯಿಸದಿರಬಹುದು.

ಪ್ಲಾಟ್‌ಫಾರ್ಮ್‌ನ ಭದ್ರತೆ. ಹೆಚ್ಚಿನ ಇಂಟರ್ನೆಟ್ ಸಾಫ್ಟ್‌ವೇರ್‌ ಮತ್ತು ಸೇವೆಗಳಂತೆ ಪ್ಲಾಟ್‌ಫಾರ್ಮ್‌ ಭದ್ರತಾ ಸಮಸ್ಯೆಗಳಿಗೆ (ಬಳಕೆದಾರರು, ನೆಟ್‌ವರ್ಕ್‌ ಸೇವೆಯ ಗುಣಮಟ್ಟ, ಸಾಮಾಜಿಕ ಪರಿಸರ, ವೈರಸ್‌ಗಳು, ಟ್ರೋಜನ್ ಹಾರ್ಸ್ ಪ್ರೋಗ್ರಾಂಗಳು, ದುರುದ್ದೇಶಪೂರಿತ ಪ್ರೋಗ್ರಾಂಗಳು ಇತ್ಯಾದಿಗಳಿಂದ ಉಂಟಾಗುವ ಸುರಕ್ಷತಾ ಸಮಸ್ಯೆಗಳು) ಒಳಗಾಗಬಹುದು ಎಂದು ನೀವು ಅರ್ಥಮಾಡಿಕೊಂಡಿದ್ದೀರಿ ಮತ್ತು ಒಪ್ಪಿಕೊಂಡಿರುತ್ತೀರಿ. ಮೊಬೈಲ್ ಸಾಧನದಲ್ಲಿ ಅಸುರಕ್ಷಿತ ಇಂಟರ್ನೆಟ್ ಸಂಪರ್ಕಗಳನ್ನು ಬಳಸಿಕೊಂಡು ನೀವು ಅಥವಾ ನಿಮ್ಮ ಮೊಬೈಲ್‌ ಮಾಡಿದ ಯಾವುದೇ ಡೇಟಾ ಪ್ರಸರಣದ ಸುರಕ್ಷತೆಗೆ Science 37 ಜವಾಬ್ದಾರನಾಗಿರುವುದಿಲ್ಲ ಮತ್ತು ಖಚಿತಪಡಿಸುವುದಿಲ್ಲ. ಪ್ಲಾಟ್‌ಫಾರ್ಮ್‌ ಅನ್ನು ಬಳಸುವಲ್ಲಿನ ಅಂತರ್ಗತ ಸುರಕ್ಷತಾ ಪರಿಣಾಮಗಳನ್ನು ನೀವು ಅಂಗೀಕರಿಸುತ್ತೀರಿ ಮತ್ತು ನಿಮ್ಮ ಸಾಧನವನ್ನು ರಕ್ಷಿಸಲು ಇರುವಂತಹ ಸುರಕ್ಷತಾ ಕ್ರಮಗಳನ್ನು (ನವೀಕರಿಸಿದ ಆ್ಯಂಟಿವೈರಸ್ ಸಿಸ್ಟಮ್‌ಗಳಂತಹ) ಅಳವಡಿಸಿಕೊಳ್ಳಲು ನಾವು ನಿಮಗೆ ಸಲಹೆ ನೀಡುತ್ತೇವೆ.

ಹೊಣೆಗಾರಿಕೆಯ ಮಿತಿ. ಕಾನೂನಿನಡಿಯಲ್ಲಿ ಅನುಮತಿಸಲಾದ ಪೂರ್ಣ ಪ್ರಮಾಣದವರೆಗೆ, ಯಾವುದೇ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್ ಅಥವಾ ಕಂಟೆಂಟ್ ಮತ್ತು ಸೇವೆಗಳ ನಿಮ್ಮ ಬಳಕೆಯಿಂದ ಅಥವಾ ಬಳಸುವಿಕೆಯ ಅಸಮರ್ಥತೆ ಕಾರಣಕ್ಕೆ ಇವುಗಳಿಗೆ ಸಂಬಂಧಿತ ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ:

ವೈಯಕ್ತಿಕ ಗಾಯ, ಆಸ್ತಿ ಹಾನಿ, ಕಳೆದುಕೊಂಡ ಲಾಭಗಳು, ಪರ್ಯಾಯ ಸರಕುಗಳು ಅಥವಾ ಸೇವೆಗಳ ವೆಚ್ಚ, ಡೇಟಾ ನಷ್ಟ, ಗೌರವದ ಹಾನಿ, ವ್ಯಾಪಾರದಲ್ಲಿ ಅಡ್ಡಿ, ಕಂಪ್ಯೂಟರ್ ವೈಫಲ್ಯ ಅಥವಾ ಅಸಮರ್ಪಕ ಕಾರ್ಯನಿರ್ವಹಣೆ, ಬೇರೆ ಯಾವುದೇ ಸಾಂದರ್ಭಿಕ, ಆಕಸ್ಮಿಕ, ಪರೋಕ್ಷ, ಆದರ್ಶಪ್ರಾಯ, ವಿಶೇಷ, ಅಥವಾ ದಂಡ ವಿಧಿಸಬಹುದಾದ ಯಾವುದೇ ತರಹದ ಹಾನಿಗಳು.

ಅಂತಹ ಒಪ್ಪಂದದ ಉಲ್ಲಂಘನೆಯಿಂದ, ತಿರುಚಿದ (ನಿರ್ಲಕ್ಷ್ಯವನ್ನು ಒಳಗೊಂಡಂತೆ) ಅಥವಾ ಬೇರೆ ರೀತಿಯಲ್ಲಿ ಮತ್ತು ಅಂತಹ ಹಾನಿಗಳು ನಿರೀಕ್ಷಿತವಾಗಿರಲಿ ಅಥವಾ ಇಲ್ಲದಿರಲಿ ಅಥವಾ ಸಾಧ್ಯತೆಯ ಬಗ್ಗೆ ಸಲಹೆ ನೀಡಲಾಗಿದ್ದರೂ ಸಹ ಈ ಮೇಲಿನ ಮಿತಿಗಳು ಅನ್ವಯಿಸುತ್ತವೆ. ಕೆಲವು ನ್ಯಾಯವ್ಯಾಪ್ತಿಗಳು ಹೊಣೆಗಾರಿಕೆಯ ಕೆಲವು ಮಿತಿಗಳನ್ನು ಅನುಮತಿಸುವುದಿಲ್ಲ ಆದ್ದರಿಂದ ಮೇಲಿನ ಕೆಲವು ಅಥವಾ ಎಲ್ಲಾ ಹೊಣೆಗಾರಿಕೆಯ ಮಿತಿಗಳು ನಿಮಗೆ ಅನ್ವಯಿಸದಿರಬಹುದು.

ನಷ್ಟ ಪರಿಹಾರ. . ನೀವು Science 37 ಮತ್ತು ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು, ಏಜೆಂಟ್‌ಗಳು, ಅಂಗಸಂಸ್ಥೆಗಳು, ಉತ್ತರಾಧಿಕಾರಿಗಳಿಗೆ ನಷ್ಟ ಪರಿಹಾರವನ್ನು ನೀಡುವಿರಿ, ರಕ್ಷಿಸುವಿರಿ ಮತ್ತು ನಿರುಪದ್ರವಿ ಎಂದು ಪರಿಗಣಿಸುವಿರಿ ಮತ್ತು ಯಾವುದೇ ನಷ್ಟಗಳು, ಹಾನಿಗಳು, ಹೊಣೆಗಾರಿಕೆಗಳು, ನ್ಯೂನತೆಗಳು, ಹಕ್ಕುಗಳು, ಕ್ರಮಗಳು, ತೀರ್ಪುಗಳು, ತೀರುವಳಿಗಳು, ಆಸಕ್ತಿ, ಪ್ರಶಸ್ತಿಗಳು, ದಂಡಗಳು, ಅಥವಾ ಸಮಂಜಸವಾದ ವಕೀಲರ ಶುಲ್ಕಗಳೂ ಸೇರಿದಂತೆ, ಈ ಪ್ಲಾಟ್‌ಫಾರ್ಮ್‌ ಅಥವಾ ಸೇವೆಯನ್ನು ಬಳಸುವ ಮೂಲಕ ಉಂಟಾಗುವ ಅಥವಾ ಈ ಪ್ಲಾಟ್‌ಫಾರ್ಮ್‌ ಮೂಲಕ ಸಲ್ಲಿಸುವ ಅಥವಾ ಲಭ್ಯವಾಗುವಂತೆ ಮಾಡುವ ಕಂಟೆಂಟ್‌ಗಳೂ ಸೇರಿದಂತೆ ಹಾಗೂ ಕೇವಲ ಅದಕ್ಕೆ ಮಿತಿಗೊಂಡಿರದಂತೆ ಈ ನಿಯಮಗಳು ಮತ್ತು ಷರತ್ತುಗಳ ಉಲ್ಲಂಘನೆಯಿಂದ ನೀವು ಸಲ್ಲಿಸುವ ಅಥವಾ ಲಭ್ಯವಾಗುವಂತೆ ಮಾಡುವ ವಿಷಯಗಳಿಗೂ ಸೇರಿದಂತೆ ಉಂಟಾಗುವ ವಕೀಲರ ಶುಲ್ಕಗಳೂ ಸೇರಿದಂತೆ ಯಾವುದೇ ರೀತಿಯ ವೆಚ್ಚಗಳಿಂದ ಮತ್ತು ಅದರ ವಿರುದ್ಧ ನಿಯೋಜಿಸುವಿರಿ.

ತೀವ್ರತೆ. ಈ ನಿಯಮಗಳು ಮತ್ತು ಷರತ್ತುಗಳಲ್ಲಿನ ಯಾವುದೇ ನಿಬಂಧನೆಯು ಅನ್ವಯಿಸುವ ಕಾನೂನಿನ ಅಡಿಯಲ್ಲಿ ಕಾನೂನುಬಾಹಿರವಾಗಿದ್ದರೆ ಅಥವಾ ಅನ್ವಯವಾಗುವ ಜಾರಿಗೊಳಿಸಲಾಗದಿದ್ದರೆ, ಮೂಲ ನಿಯಮದ ಪರಿಣಾಮಕ್ಕೆ ಸಾಧ್ಯವಾದಷ್ಟು ಹತ್ತಿರವಾದುದನ್ನು ಸಾಧಿಸಲು ನಿಬಂಧನೆಯ ಉಳಿದ ಭಾಗವನ್ನು ತಿದ್ದುಪಡಿ ಮಾಡಲಾಗುತ್ತದೆ ಮತ್ತು ಈ ನಿಯಮಗಳು ಮತ್ತು ಷರತ್ತುಗಳ ಎಲ್ಲಾ ಇತರ ನಿಬಂಧನೆಗಳು ಸಂಪೂರ್ಣವಾಗಿ ಮತ್ತು ಪರಿಣಾಮಕಾರಿಯಾಗಿ ಮುಂದುವರಿಯುತ್ತದೆ.

ನಿಯಂತ್ರಿಸುವ ಕಾನೂನು. ಯಾವುದೇ ಕಾನೂನು ನಿಬಂಧನೆ ಅಥವಾ ನಿಯಮಗಳ ಆಯ್ಕೆ ಅಥವಾ ಸಂಘರ್ಷಕ್ಕೆ ಎಡೆ ಮಾಡಿಕೊಡದೆ, ಈ ನಿಯಮಗಳು ಮತ್ತು ಷರತ್ತುಗಳು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಆಂತರಿಕ ಕಾನೂನುಗಳ ಅನುಸಾರ ನಿಯಂತ್ರಿಸಲ್ಪಡುತ್ತವೆ ಮತ್ತು ಅರ್ಥೈಸಲ್ಪಡುತ್ತವೆ. ಈ ನಿಯಮಗಳು ಮತ್ತು ಷರತ್ತುಗಳು ಅಥವಾ ವೇದಿಕೆಯಿಂದ ಉದ್ಭವಿಸುವ ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಕಾನೂನು ದಾವೆ, ಕ್ರಮ ಅಥವಾ ವಿಚಾರಣೆಗಳನ್ನು ಕೇವಲ ಕ್ಯಾಲಿಫೋರ್ನಿಯಾ ರಾಜ್ಯದ ನ್ಯಾಯಾಲಯಗಳಿಂದ ಮಾತ್ರ ಅನನ್ಯವಾಗಿ ನಿರ್ವಹಿಸಲಾಗುತ್ತದೆ. ಅಂತಹ ನ್ಯಾಯಾಲಯಗಳಿಂದ ಮತ್ತು ಅಂತಹ ನ್ಯಾಯಾಲಯಗಳಲ್ಲಿನ ಸ್ಥಳಗಳಿಂದ ನಿಮ್ಮ ಮೇಲೆ ಕಾನೂನುವ್ಯಾಪ್ತಿಯನ್ನು ಚಲಾಯಿಸುವುದಕ್ಕೆ ನೀವು ಯಾವುದೇ ಮತ್ತು ಎಲ್ಲ ಆಕ್ಷೇಪಗಳನ್ನು ಮನ್ನಾ ಮಾಡುತ್ತೀರಿ.

ಸಂಪೂರ್ಣ ಒಪ್ಪಂದ. ಪ್ಲಾಟ್‌ಫಾರ್ಮ್‌ ಸೇವೆಗೆ ಸಂಬಂಧಿಸಿ ಈ ನಿಯಮಗಳು ಮತ್ತು ಷರತ್ತುಗಳು ಹಾಗೂ ನಮ್ಮ ಗೌಪ್ಯತೆ ನೀತಿಯು ನಿಮ್ಮ ಮತ್ತು Science 37 ನಡುವಿನ ಸಮಗ್ರ ಒಪ್ಪಂದವನ್ನು ರೂಪಿಸುತ್ತವೆ ಹಾಗೂ ವೇದಿಕೆಗೆ ಸಂಬಂಧಿಸಿ, ಲಿಖಿತ ಅಥವಾ ಮೌಖಿಕ ಸ್ವರೂಪದ ಎಲ್ಲ ಹಿಂದಿನ ಮತ್ತು ಸಮಕಾಲೀನ ತಿಳುವಳಿಕೆಗಳು ಮತ್ತು ಒಪ್ಪಂದಗಳನ್ನು ಅಧಿಕ್ರಮಿಸುತ್ತವೆ.

ಮನ್ನಾ. ಉಭಯಪಕ್ಷಗಳಿಂದ, ಚಲಾವಣೆ ಮಾಡಲು ಆಗದಿರುವಿಕೆ ಮತ್ತು ಚಲಾವಣೆ ಮಾಡುವಲ್ಲಿನ ವಿಳಂಬವು ಇದರಡಿಯಲ್ಲಿನ ಯಾವುದೇ ಹಕ್ಕು ಅಥವಾ ಯಾವುದೇ ಅಧಿಕಾರದ ಮನ್ನಾ ಆಗಿರುವುದಿಲ್ಲ, ಅದೇ ರೀತಿ ಯಾವುದೇ ಹಕ್ಕು ಅಥವಾ ಅಧಿಕಾರದ ಏಕೈಕ ಅಥವಾ ಭಾಗಶಃ ಚಲಾವಣೆಯು, ಅದರ ಮುಂದುವರಿದ ಅಥವಾ ಇದರಡಿಯಲ್ಲಿನ ಇತರ ಯಾವುದೇ ಹಕ್ಕುಗಳ ಚಲಾವಣೆಯನ್ನು ಪ್ರತಿಬಂಧಿಸುವುದಿಲ್ಲ. ಒಂದು ವೇಳೆ ಈ ನಿಯಮಗಳು ಮತ್ತು ಷರತ್ತುಗಳು ಹಾಗೂ ಯಾವುದೇ ಅನ್ವಯಿಸುವ ಖರೀದಿ ಅಥವಾ ಇತರ ನಿಯಮಗಳ ನಡುವೆ ಸಂಘರ್ಷ ಕಂಡುಬಂದಲ್ಲಿ, ಈ ನಿಯಮಗಳು ಮತ್ತು ಷರತ್ತುಗಳ ನಿಯಮಗಳೇ ಜಾರಿಯಲ್ಲಿರುತ್ತವೆ.

ಒಪ್ಪಂದದ ನಿಯಮಗಳ ನವೀಕರಣ. ಈ ನಿಯಮಗಳು ಮತ್ತು ಷರತ್ತುಗಳನ್ನು ಕಾಲಕಾಲಕ್ಕೆ ನವೀಕರಿಸಬಹುದು. ಪ್ಲಾಟ್‌ಫಾರ್ಮ್‌ ಅನ್ನು ಬಳಸುವುದನ್ನು ಮುಂದುವರಿಸುವ ಮೂಲಕ, ಎಲ್ಲಾ ನವೀಕರಿಸಿದ ನಿಯಮಗಳನ್ನು ಅಂಗೀಕರಿಸಲು ನೀವು ಒಪ್ಪುತ್ತೀರಿ. ನವೀಕರಿಸಿದ ಯಾವುದೇ ನಿಯಮಗಳು ಮತ್ತು ಷರತ್ತುಗಳನ್ನು ನೀವು ಒಪ್ಪದಿದ್ದರೆ, ನೀವು ಪ್ಲಾಟ್‌ಫಾರ್ಮ್‌ ಅನ್ನು ಬಳಸುವುದನ್ನು ನಿಲ್ಲಿಸಬೇಕು.

ನಮ್ಮನ್ನು ಸಂಪರ್ಕಿಸಿ

ಒಂದು ವೇಳೆ ಈ ನಿಯಮಗಳು ಮತ್ತು ಷರತ್ತುಗಳ ಕುರಿತು ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಅಥವಾ Science 37ಕ್ಕೆ ವರದಿಯನ್ನು ನೀಡಬೇಕಾದರೆ ಅಥವಾ ಅದರೊಂದಿಗೆ ಸಂವಹನ ಮಾಡಬೇಕಾದರೆ, ದಯವಿಟ್ಟು ನಮ್ಮನ್ನುLegal@Science37.com ಮೂಲಕ ಸಂಪರ್ಕಿಸಿರಿ.